ನಮ್ಮ ಸಂಘದ ಬಗ್ಗೆ
ನಮ್ಮ ಸಂಘಟನೆಯ ಇತಿಹಾಸ, ನಾಯಕತ್ವ ಮತ್ತು ಮುನ್ನಡೆಸುವ ಮೌಲ್ಯಗಳನ್ನು ತಿಳಿಯಿರಿ.
ನಮ್ಮ ಸಂಘ
2016 ರಲ್ಲಿ ಸ್ಥಾಪಿತವಾದ ನಮ್ಮ ಸಂಘಟನೆ, ಶಾಮಿಯಾನ ಮಾಲಕರ ಮತ್ತು ಕಾರ್ಮಿಕರ ಅಭಿವೃದ್ಧಿ ಮತ್ತು ಏಳಿಗೆಗಾಗಿ ಶ್ರಮಿಸುತಿದೆ.
ನಮ್ಮ ಗುರಿ
ನಮ್ಮ ಸದಸ್ಯರು ಆರ್ಥಿಕವಾಗಿ ಮುಂದೆ ಬರಲು ಮತ್ತು ಕೆಲಸಗಳಲ್ಲಿ ಗುಣಮಟ್ಟ ನಿರ್ವಹನೆ ಮಾಡಲು, ತಮ್ಮ ಅಸ್ಥಿತ್ವವನ್ನು ಉಳಿಸಿಕೊಳ್ಳಲು ಸಲಹೆ ಸೂಚನೆಯನ್ನು ಕೊಡುವುದು.
ನಮ್ಮ ಸದಸ್ಯರಿಗೆ ಸಮಾಜದಲ್ಲಿ ಸ್ವಾಭಿಮಾನಕ್ಕೆ ದಕ್ಕೆ ಬಂದಾಗ ಎಲ್ಲಾ ಸದಸ್ಯರು ಅವರ ಬೆಂಬಲಕ್ಕೆ ನಿಲ್ಲುವುದು. ನಮ್ಮ ಸಂಘದ ಸದಸ್ಯರು ಅಥವಾ ಅವರ ಕಾರ್ಮಿಕರು, ಅರೋಗ್ಯ ವಿಷಯಗಳಲ್ಲಿ ಅಥವಾ ಆಪತ್ ಕಾಲದಲ್ಲಿ ಅವರಿಗೆ ಸಹಾಯ ಮಾಡುವುದು.

ನಮ್ಮ ಯಾನ
ವ್ಯಾಪಾರ, ಉದ್ದಿಮೆ, ವ್ಯವಹಾರ ಸೇವೆ ಇತ್ಯಾದಿಗಳ ಕಾರ್ಯಕ್ಷೇತವು, ನಮ್ಮ ರಾಷ್ಟ್ರದಲ್ಲಿ ಅಗಾಧವಾಗಿ ಬೆಳೆದಿದೆ. ಅದರಲ್ಲಿ ಸೇವಾ ಮನೋಭಾವನೆಯ ಚಟುವಟಿಕೆಗಳ ವ್ಯವಹಾರಗಳಲ್ಲಿ ನಮ್ಮ ಶಾಮಿಯಾನ ಪರಿಕರಗಳನ್ನು ಸಭೆ ಸಮಾರಂಭಗಳಿಗೆ ಬಾಡಿಗೆ ನೆಲೆಯಲ್ಲಿ ಜೋಡಿಸಿ ಕೊಡುವುದೇ ಶಾಮಿಯಾನದ ವ್ಯವಹಾರ. ಈ ಒಂದು ವ್ಯವಹಾರದಲ್ಲಿ ಕೆಲವೊಂದು ತೊಡರು, ತೊಡಕು ಸೇವಾದರಗಳಲ್ಲಿ ಅನಿಶ್ಚಿತತೆಯನ್ನು ಹೋಗಲಾಡಿಸುವ ಉದ್ದೇಶದಿಂದ ಬಂಟ್ವಾಳ ತಾಲೂಕಿನ ವಿಟ್ಲ ಹೋಬಳಿಯ ಕೆಲವು ಸಮಾನ ಮನಸ್ಕ ಶಾಮಿಯಾನ ವ್ಯವಹಾರವನ್ನು ಮಾಡುವವರನ್ನು ಒಟ್ಟುಗೂಡಿಸಿ, ಈ ಒಂದು ಉದ್ದಿಮೆಗೆ ಯಾಕೆ ಸಾಮಾಜಿಕ ಮನ್ನಣೆ ದೊರಕಿಸಿ ಕೊಡಬಾರದು ಎ೦ದು ಯೋಜಿಸಿ 2016ನೇ ಇಸವಿಯಲ್ಲಿ ಶಾಮಿಯಾನ ಮಾಲಕರ ಸಂಘವನ್ನು ಬಹಳ ಅದ್ಧೂರಿಯಾಗಿ, ಕೆಲವೊಂದು ಮಂಗಳೂರಿನ ಶಾಮಿಯಾನ ಪೂರೈಕೆದಾರರ ಸಹಕಾರದೊಂದಿಗೆ ಈ ಸಂಘವನ್ನು ಸ್ಥಾಪಿಸಲಾಯಿತು. ಈ ಉದ್ದಿಮೆಯಲ್ಲಿ ಇರತಕ್ಕಂತಹ ಕೆಲವೊಂದು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ. ಸಂದರ್ಭದಲ್ಲಿಯೇ ಈ ಸಂಘಟನೆಯ ಕಾರ್ಯವ್ಯಾಪ್ತಿಯನ್ನು ಬಂಟ್ವಾಳ ತಾಲೂಕಿನಾದ್ಯಂತ ವಿಸ್ತರಿಸಿ, ವಿಟ್ಟ ಹೋಬಳಿಯ ಸುಮಾರು 22 ರಿಂದ 30 ಜನರ ಈ ಸಂಘಟನೆಯನ್ನು ತಾಲೂಕಿನಾದ್ಯಂತ 108 ಜನರನ್ನು ಸೇರ್ಪಡೆಗೊಳಿಸಿ, ತಾಲೂಕು ಮಟ್ಟದ ಸಂಘವನ್ನು ಬಂಟ್ವಾಳದ ಸ್ಪರ್ಶಾ ಕಲಾಮಂದಿರದಲ್ಲಿ ಸಂಘಟಿಸುವುದರೊಂದಿಗೆ ಕೇವಲ ಬಂಟ್ವಾಳ ತಾಲೂಕಿನ ಸದಸ್ಯರನ್ನು ಮಾತ್ರ ಸೇರ್ಪಡೆಗೊಳಿಸಿದ್ದರೂ ಮುಂದಕ್ಕೆ ಕಾರ್ಯವ್ಯಾಪ್ತಿಯನ್ನು ಜಿಲ್ಲಾ ಮಟ್ಟಕ್ಕೆ ವಿಸ್ತರಿಸಬೇಕೆಂಬ ಮಹತ್ವಾಕಾಂಕ್ಷೆಯನ್ನು ಇಟ್ಟುಕೊ೦ಡು ಈ ಸಂಘಟನೆಗೆ ದ.ಕ. ಜಿಲ್ಲಾ ಶಾಮಿಯಾನ ಮಾಲಕರ ಸಂಘ ಎಂದು ನಾಮಕರಣಗೊಳಿಸಲಾಯಿತು.
ಜಿಲ್ಲಾ ಮಟ್ಟದಲ್ಲಿ ನಮ್ಮೀ ಸಂಘಟನೆಯನ್ನು ವಿಸ್ತರಿಸಬೇಕೆಂಬ ಮಹದಾಸೆ ಇದ್ದಾಗ ನಮ್ಮೊಂದಿಗೆ ಪರಿಚಿತರಾಗಿ, ಸಂಘಟನೆಯ ಜಲ್ಲಾ ವ್ಯಾಪ್ತಿಗೆ ಬೀಜ ಬಿತ್ತೆದವರು ಮಂಗಳೂರಿನ ಉಮಾನಾಥ ಸುವರ್ಣ ಇವರು. ಇನ್ನೇನು ಜಿಲ್ಲಾ ಮಟ್ಟಕ್ಕೆ ವಿಸ್ತರಿಸಬೇಕೆಂಬ ಕನಸು ಕಾಣುತ್ತಿರುವಾಗಲೇ ನಮಗೆ ಮೂಡುಬಿದಿರೆ ಕಡೆಯಿಂದ ಸ್ಪಂದಿಸಿದವರು ಜಿ.ಕೆ ಎರೇ೦ಜರ್ಸ್ನ ಗಣೇಶ್ ಕಾಮತ್ ಮತ್ತು ಎಸ್.ಡಿ.ಕೆ. ಯ ಶಿವಪಸಾದ್ ಹೆಗ್ಡೆ ಮಿಜಾರು ಇವರು. ಬಂಟ್ವಾಳ ತಾಲೂಕಿನ ನೇತೃತ್ವವನ್ನು ಸುಭಾಶ್ಚಂದ್ರ ಜೈನ್ರವರಿಗೆ ವಹಿಸಿ, ಮೂಡುಬಿದಿರೆ ಘಟಕವನ್ನು ಸ್ಥಾಪಿಸುವುದರ ಮೂಲಕ ನಮ್ಮ ಚಿಂತನೆಗೆ ಚಾಲನೆ ದೊರೆಯಿತು. ಈ ಹೊತ್ತಿನಲ್ಲಿ ಆಗಾಗಲೇ ಬೆಳ್ತಂಗಡಿ ತಾಲೂಕಿನ ಮೈತ್ರಿ ಶಾಮಿಯಾನದ ಪೃಥ್ವಿರಂಜನ್ ಭಟ್ರವರು ಎಸ್.ಎಂ.ಎಸ್ ನ ಲತೀಘರವರ ನೇತೃತ್ವದಲ್ಲಿ ಘಟಕವು ಆರಂಭವಾಗಿಯೇ ಬಿಟ್ಟಿತು. ಮಂಗಳೂರು ಘಟಕದ ಆರಂಭೋತ್ಸವವು ಸ್ಥಲ್ಪ ಮಟ್ಟಿಗೆ ವಿಳಂವಾದರೂ ಕೆಲವೊಂದು ಉತ್ಸಾಹಿ ನಾಯಕರುಗಳಾದ ಹರೀಶ್ ಪಡೀಲ್, ನಿಶಿತ್ ಪೂಜಾರಿ, ಕ್ಲೆವರ್ ಡಿಸೋಜರವರ ಪ್ರೇರಣೆಯೊಂದಿಗೆ ಶ್ರೀ ಉಮಾನಾಥ ಸುವರ್ಣ ಇವರ ಅಧ್ಯಕ್ಷತೆ ಹಾಗೂ ಶ್ರೀ ಯುವರಾಜ ಮೂಡುತೆಡ್ಡೆರವರು ಕಾರ್ಯದರ್ಶಿಯಾಗಿ ಈ ತಂಡ ಉದಯವಾಗೊ ಅತ್ಯಂತ ಬಲಿಷ್ಯವಾಗಿ ಬೆಳೆಯುತ್ತಾ ಬಂತು. ಈ ಒಂದು ಚಿಕ್ಕ ಹೋಬಳಿ ಮಟ್ಟದ ವಿಟ್ಲ ಪರಿಸರದಿಂದ ಆರಂಭವಾದ ಈ ಸಂಘದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದ ಕಾರ್ಯದರ್ಶಿ ಶ್ರೀ ಶ್ರೀನಿವಾಸ ಪೂಜಾರಿ, ಎಂ.ಎಚ್.ನ ಶ್ರೀ ಮ್ಯೊದೀನ್ ಅನೀಸ್, ಆರ್.ಕೆ. ಭಟ್ ಮೆಲ್ಕಾರ್, ಸಾಲಿಯಾನ್ ಸಹೋದರರು ಇವರೆಲ್ಲರ ಸಂಘಟನೆಗಾಗಿ ಪಾತ್ರ ಯಾವತ್ತೂ ಮರೆಯುವಂತಿಲ್ಲ.
ಆತ್ಮೀಯರೇ, ಕೆಲವೊಂದು ಕನಸು ಕಾಣುವುದು ಸಹಜ. ಆದರೆ ಅದನ್ನು ನನಸು ಮಾಡುವಲ್ಲಿ ಕೆಲವೊಂದು ಕಷ್ಟಸಾಧ್ಯಗಳು ಇದ್ದೇ ಇದೆ. ಸಂಘಟನೆಗೆ ಒಂದು ರೂಪು ಕೊಟ್ಟು ಅದನ್ನು ಗೌರವಯುತವಾಗಿ ಗುರುತಿಸಬೇಕಿದ್ದರೆ, ಸಂಬಂಧಪಟ್ಟ ಇಲಾಖೆಯಲ್ಲಿ ನೋಂದಾಯಿಸಬೇಕಾದ ದೃಷ್ಟಿಯಿಂದ ದಿನಾಂಕ 19-11-2018 ರಂದು ಮಾನ್ಯ ಸಹಕಾರಿ ಸಂಘಗಳ ಉಪನಿಬಂಧಕರು ಮಂಗಳೂರು. ಇವರ ಆದೇಶ ಸಂಖ್ಯೆ 080//608/120 2018-19 ರ ಪಕಾರ ನೋಂದಾಯಿಸಲ್ಪಟ್ಟಿರುವುದು ಈಗ ಇತಿಹಾಸ. ಈ ಸಂಘಟನೆಯ ಸ್ಥಾಪಕ ಪ್ರವರ್ತಕ ಸದಸ್ಯರಾಗಿ ತೊಡಗಿಸಿಕೊಂಡ ಶ್ರೀಯುತ ಬಾಬು ಕೆ ವಿಟ್ಲ, ಶ್ರೀಯುತ ಸುಭಾಶ್ಚಂದ್ರ ಜೈನ್, ಶ್ರೀಯುತ ಶ್ರೀನಿವಾಸ ಪೂಜಾರಿ, ಶ್ರೀ ಮ್ಯೊದೀನ್ ಅನೀಸ್, ಶ್ರೀ ಸಂದೀಪ್ ಜೆರಾಲ್ಡ್ ಮೆನೆಜಸ್, ಶ್ರೀ ಚಂದ್ರಹಾಸ ಸುವರ್ಣ, ಶ್ರೀ ಶಿವಪ್ರಸಾದ್ ಹೆಗ್ಡೆ ಮಿಜಾರು, ಶ್ರೀ ಸುಕೇಶ್ ಕುಮಾರ್ ಜೈನ್, ಶ್ರೀ ಉಮನಾಥ ಸುವರ್ಣ, ಶ್ರೀ ಚಂದ್ರಶೇಖರ್ ಸಾಲ್ಯಾನ್, ಶ್ರೀ ಹಾಜಿ ಅಬ್ದುಲ್ ಲತೀಫ್, ಶ್ರೀ ಪೃಥ್ವಿರಂಜನ್, ಶ್ರೀ ಮನು ಜಯರಾಜ್, ಶ್ರೀ ಜಿ. ಗಣೇಶ್ ಕಾಮತ್, ಶ್ರೀ ಹರೀಶ್ ಕುಮಾರ್ ಇವರುಗಳ ಸಂಘಟನಾತ್ಮಕ ಬೆಂಬಲ ಯಾವತ್ತೂ ಶ್ಲಾಘನೀಯ, ಅಭಿನಂದನೀಯ.
ಬಂಧುಗಳೇ, ನಮ್ಮೀ ಸಂಘಟನೆಯಲ್ಲಿ ಇದೀಗ ಬಂಟ್ವಾಳದಿಂದ ಸುಮಾರು 119 ಜನ ಸದಸ್ಯರು, ಮೂಡುಬಿದಿರೆಯಿಂದ 110 ಸದಸ್ಯರು, ಮಂಗಳೂರಿನಿಂದ 242 ಜನ ಸದಸ್ಯರು ಹಾಗೂ ಬೆಳ್ತಂಗಡಿಯ 127 ಜನರು ಸದಸ್ಯರಾಗುವ ಮೂಲಕ ನಮ್ಮೀ ಸಂಘಟನೆಗೆ ಸುಮಾರು 720 ಜನರ ಬಲವನ್ನು ತಂದು ಕೊಟ್ಟಿದೆ. ಪುತ್ತೂರು ಮತ್ತು ಸುಳ್ಳ ತಾಲೂಕಿನ ನಮ್ಮ ಉದ್ದಿಮೆಯ ಸದಸ್ಯರನ್ನು ಸೇರ್ಪಡೆಗೊಳಿಸುವುದಕ್ಕಾಗಿ ಪ್ರಯತ್ನವು ಸಾಗುತ್ತಲೇ ಇದೆ. ಜಿಲ್ಲಾ ವ್ಯಾಪ್ತಿಯ ನಾಲ್ಕು ಘಟಕಗಳು ಒಳ್ಳೆಯ ರೀತಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ವ್ಯವಹಾರಿಕೆ ತೊಂದರೆಗಳ ಹೋಗಲಾಡಿಕೆಯಲ್ಲಿ ಸಫಲತೆ ಕಾಣದಿದ್ದರೂ ಸಂಘಟನಾತ್ಮಕವಾಗಿ ಸಭೆಗಳು, ಲೆಕ್ಕಪತ್ರಗಳು, ವಾರ್ಷಿಕ ಮಹಾಸಭೆ, ಕ್ರೀಡಾಕೂಟ, ವಾರ್ಷಿಕ ಮಿಲನೋತ್ಸವ. ತರಬೇತಿಗಳು, ಸಾಂಸ್ಕೃತಿಕ ಉತ್ಸವ, ಶಿಬಿರಗಳನ್ನು ಆಯೋಜಿಸುವುದರ ಮೂಲಕ ಈ ಸಂಘಟನೆಗೆ ನೆಲೆಯನ್ನು ಕಲ್ಪಿಸುವುದರೊಂದಿಗೆ ಬೆಲೆಯನ್ನು ಕಟ್ಟುವಷ್ಟು ಸಮರ್ಥವಾಗಿ ಬೆಳೆದಿದೆ ಎನ್ನಲು ಹರ್ಷವಾಗಿದೆ.
ನಮ್ಮ ಶಾಮಿಯಾನ ಉದ್ದಿಮೆಯಲ್ಲಿ ದೀರ್ಫಾವಧಿ ಕಾಲದಿಂದ ತೊಡಗಿಸಿಕೊಂಡು ಬಂದ ಹಿರಿಯ ಶಾಮಿಯಾನ ಮಾಲಕರನ್ನು ಗುರುತಿಸಿ ಸನ್ಮಾನಿಸಿದ್ದೇವೆ, ಶಾಮಿಯಾನ ಮಾಲಕರ ಮಕ್ಕಳಿಗೆ ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ಸನ್ಮಾನಿಸಿದ್ದೇವೆ ಮತ್ತು ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ಕೊಟ್ಟಿದ್ದೇವೆ.
ನಮ್ಮ ಶಾಮಿಯಾನ ಸಂಘದ ಮಾಲಕರಿಗೆ ಹಾಗೂ ಕಾರ್ಮಿಕರಿಗೆ ಆಪತ್ಕಾಲದಲ್ಲಿ ನೆರವನ್ನು ನೀಡಿ ಅವರ ಮನೋಭಾವನೆ ಮತ್ತು ಧ್ಯೇಯವನ್ನು ಹೆಚ್ಚಿಸಿ ಹಾಗೆಯೇ ಆರೋಗ್ಯ ಸಮಸ್ಯೆಯಿಂದ ಅಥವಾ ಅಪಘಾತದಿಂದ ನಿಧನ ಹೊಂದಿದ ನಮ್ಮ ಸಂಘದ ಸದಸ್ಯರಿಗೆ ನೆರವನ್ನು ನೀಡುತ್ತಾ ಬಂದಿದ್ದೇವೆ. ಇನ್ನು ಮುಂದೆಯೂ ಹೆಚ್ಚಿನ ನೆರವನ್ನು ನೀಡಲು ಸಂಘವು ಹೆಚ್ಚಿನ ಪ್ರಯತ್ನವನ್ನು ಮಾಡುತ್ತಿದೆ.
ನಮ್ಮ ನಾಯಕತ್ವ ತಂಡ

ಶ್ರೀ ಬಾಬು ಕೆ. ವಿಟ್ಲ
ಜಿಲ್ಲಾಧ್ಯಕ್ಷರು

ಶ್ರೀ ಕ್ಲೇವರ್ ಡಿಸೋಜ, ಮಂಗಳೂರು
ಉಪಾಧ್ಯಕ್ಷರು

ಶ್ರೀ ಸುಭಾಷ್ಚಂದ್ರ ಜೈನ್, ಬಂಟ್ವಾಳ
ಉಪಾಧ್ಯಕ್ಷರು

ಶ್ರೀ ಶಿವಪ್ರಸಾದ್ ಹೆಗ್ಡೆ, ಮೂಡಬಿದ್ರಿ
ಉಪಾಧ್ಯಕ್ಷರು

ಶ್ರೀ ಹಾಜಿ ಅಬ್ದುಲ್ ಲತೀಫ್, ಬೆಳ್ತಂಗಡಿ
ಉಪಾಧ್ಯಕ್ಷರು

ಶ್ರೀ ಪಿಯೂಷ್ ಮ್ಯಾಕ್ಸಿಮ್ ಸಿಕ್ವೇರಾ, ಬಂಟ್ವಾಳ
ಜಿಲ್ಲಾ ಪ್ರಧಾನ ಕಾರ್ಯದರ್ಶಿ

ಶ್ರೀ ನಿಶಿತ್ ಪೂಜಾರಿ, ಮಂಗಳೂರು
ಕೋಶಾಧಿಕಾರಿ
ನಮ್ಮ ಸಾಧನೆಗಳು
ಸಕ್ರಿಯ ಸದಸ್ಯರು
ಘಟಕಗಳು
ವರ್ಷಗಳ ಅನುಭವ